Friday, August 19, 2011

ಇದು ಕದ್ದದ್ದೂ ಅಲ್ಲ.... ಸ್ವಂತದ್ದೂ ಅಲ್ಲ...!!


ಶುದ್ದ ಅಂತಃಕರಣದಿಂದ ನನ್ನನ್ನು ಪ್ರೀತಿಸಿದಿರೋ ಅಥವಾ ತೇಲಿಹೋಗುವ ಬಿಳಿಮೋಡದ
ಹಾಗೆ ನಿಮ್ಮ ಮನಸ್ಸಿನಲ್ಲಿ ಈ ಭಾವನೆಯನ್ನು ಕುಣಿಸಿ ಕೈ ಬಿಡ್ತಿದಿರೋ ?
ಎಲ್ಲೋ ಎನೋ ಅನ್ನಿಸ್ತಾ ಇದಿಯಾ ಮುಂದೆ ಓದಿ.....................
 
ಅನೇಕ ಬಗೆಯ ವ್ಯಾಮೋಹ ಆಸೆ ಮತ್ತು ಒಳ್ಳೆಯ ಕೆಟ್ಟ ಸೆಳೆತಗಳಿಗೆ ಸಿಕ್ಕಿರುವ
ಮನುಷ್ಯನ ಮನಸ್ಸಿಗಿಂತಲೂ ವಿಚಿತ್ರವಾದ ವಸ್ತು ಬೇರೊಂದಿಲ್ಲ.
ಎಲ್ಲ ವ್ಯಕ್ತಿಗಳು ತಮ್ಮ ಮನಸ್ಸಿನ ದಾಸರೆ, ಅಂತಹ ಮನಸ್ಸಿನ
ದಾಸರಾಗಿರುವವರ ಪ್ರೇಮಕ್ಕೆ ಯಾವ ಶಕ್ತಿಯಿದೆ ?

ತೀರ ನಿರ್ಜೀವವಾದ ಶಕ್ತಿ ಎಂದರೆ ಮಾನವ ಪ್ರೇಮವೇ ಇರಬೇಕು.
ಮನುಷ್ಯರನ್ನು ಪ್ರೀತಿಸುವದಕ್ಕಿಂತ ನಿಸರ್ಗವನ್ನು ಪ್ರೀತಿಸುವದರಲ್ಲಿ
ನಿರಾಶೆಗೆ ಒಳಗಾಗುವ ಭೀತಿ ಕಡಿಮೆ. ಮನುಷ್ಯನ ರೂಪ ಕ್ಷಣಭಂಗುವಾದುದು.
ಮನಸ್ಸು ಚಾಂಚಲ್ಯಕ್ಕೆ ಸಿಲುಕುವ ವಸ್ತು. ಒಮ್ಮೆ ಇರುವ ಮನಸ್ಸು ಮತ್ತೊಮ್ಮೆ ಇರುವುದಿಲ್ಲ.
ಪ್ರಕೃತಿಯ ವಿಷಯ ಆಗಲ್ಲ, ಅವಳು ನಿತ್ಯನೂತನಳು, ಅವಳ ಲಾವಣ್ಯದಲ್ಲಿ
ಬದಲಾವಣೆ ಇದೆ; ಅದಕ್ಕೆ ಮುಪ್ಪು ಸಾವುಗಳಿಲ್ಲ ಇದಲ್ಲದೆ ನಮ್ಮನ್ನು ಮೋಹದಲ್ಲಿ
ಸಿಕ್ಕಿಸುವ ಪ್ರಲೋಭನೆ ಇಲ್ಲ, ಅವಳ ಚಲುವು ಶಾಂತವಾದುದು ಅವಳ ನಗುವಿನಲ್ಲಿ
ಮನಸ್ಸನ್ನು ಮುದಗೊಳಿಸುವ ಸ್ನಿಗ್ದತೆ ಇದೆ; ಆದರೆ ಅದು ಆಸೆ ಆಕಾಂಕ್ಷೆಗಳಿಂದಲೂ
ಮೇಲೆ ಹೋಗಿರುವಂತಹುದು, ಅವಳನ್ನು ಪ್ರೀತಿಸಲು ಸಮಾಜದ ಭಂಧನಗಳಿಲ್ಲ,
ಜಾತಿ ಮತ್ತು ಅಂತಸ್ತುಗಳ ವ್ಯತ್ಯಾಸವಿಲ್ಲ. ತನ್ನನ್ನು ಪ್ರೀತಿಸಿದವರನ್ನು
ಅವಳು ಪ್ರೀತಿಸುವಷ್ಟು ಮತ್ತೆ ಯಾರು ಪ್ರೀತಿಸುವುದಿಲ್ಲ..........

ಸ್ತ್ರೀಯರನ್ನು ಪ್ರೀತಿಸುವವರಿಗಿಂತ ದೊಡ್ಡ ಮೂರ್ಖರು ಯಾರು ?
                                                                                                 
                                                              ನಿಮ್ಮವ ತಾರಾನಾಥ

No comments:

Post a Comment